“ಊರು” ಬಹಳ ಸ್ವಾರಸ್ಯವಾದ ಪರಿಕಲ್ಪನೆ. ಇಂದು ಇದರ ಬಗ್ಗೆ ಸ್ವಲ್ಪ ವಿವರ, ಮತ್ತು 3 ಭಾಗದ ಚಟುವಟಿಕೆ.


“ನಿಮ್ಮದು ಯಾವೂರು?”
ಎಲ್ಲೇ ಹೋಗಿ. ಗುರುತು ಪರಿಚಯ ಇಲ್ಲದವರ ಜೊತೆಯಲ್ಲಿ ಸಂಭಾಷಣೆ ಶುರುವಾಗಿ ಮೂರನೇ ಅಥವಾ ನಾಲ್ಕನೇ ಪ್ರಶ್ನೆಯ ವೇಳೆಗೆ ಈ ನಿಮ್ಮೂರು ಪ್ರಶ್ನೆಗೆ ಬಂದುಬಿಡುತ್ತೆ.

ಊರು

ಭೂಗೋಳಶಾಸ್ತ್ರದಲ್ಲಿ ಈ ಊರು ಅನ್ನೋದರ ಬಗ್ಗೆ ಬಹಳ ಕುತೂಹಲ ಮತ್ತು ಆಸಕ್ತಿ ಉಂಟು.

ಏಕಿದು?

ಊರು ಅನ್ನೋದು ಯಾವುದೋ ನಕಾಶೆ ಮೇಲಿರೋ ಬರೀ ಒಂದು ಚುಕ್ಕಿ ಅಲ್ಲ. ಅದೊಂದು ವಿಶೇಷವಾದ ಪರಿಕಲ್ಪನೆ. ಒಂದಷ್ಟು ಬೀದಿಗಳು, ಕಟ್ಟಡಗಳು, ಚರಂಡಿಗಳು, ಮರಗಳು, ಜನಗಳು … ಇವುಗಳನ್ನ ತಂದು ಯಾವುದೋ ಒಂದು ತರಹ ಜೋಡಿಸಿಟ್ಟುಬಿಟ್ಟರೆ ಅದು ಊರಾಗಿಬಿಡೋದಿಲ್ಲ.

ಅದು ಬರಿಯ ನೆಲಸುನಾಡು (ಇಂಗ್ಲೀಷನಲ್ಲಿ — ಸೆಟ್ಟಿಲ್ಮೆಂಟ್ / settlement).

 

ಒಂದು ನೆಲಸುನಾಡು ಊರಾಗಬೇಕಾದರೆ ಅದಕ್ಕೆ ಅದರದೇ ಆದ ಹಲವಾರು ಗುಣಲಕ್ಷಣಗಳು ಮೂಡಿಕೊಳ್ಳಬೇಕು. ಇದು ಹೇಗಾಗುತ್ತೆ?

ಆ ಜಾಗಕ್ಕೆ — ಆ ನೆಲಸುನಾಡಿಗೆ — ಒಂದು ಹೆಸರು ಕೊಡುತ್ತೀವಿ. ಆ ಹೆಸರು ಆ ನೆಲಸುನಾಡಿನ — ಆ ಜಾಗದ — ಚರಿತ್ರೆಯೋ ಪುರಾಣ ಕಥೆಯೋ ಮೇಲ್ಮೈ ಲಕ್ಷಣವೋ ಮತ್ತಾವುದಕ್ಕೋ ಹೊಂದಿರುತ್ತದೆ.

ಪ್ರತಿಯೂರಿಗೂ ಕೆಲವು ಮೂಲಭೂತವಾದ ಅಂಕಿ ಅಂಶಗಳಿರುತ್ತವೆ. ಉದಾಹರಣೆಗೆ — ಅಕ್ಷಾಂಶ (ಇಷ್ಟು º ಉತ್ತರ ಅಥವಾ ದಕ್ಷಿಣ), ರೇಖಾಂಶ (ಇಷ್ಟು º ಪೂರ್ವ ಅಥವಾ ಪಶ್ಚಿಮ), ಸಮುದ್ರ ಮಟ್ಟದಿಂದ ಎತ್ತರ (ಮೀಟರುಗಳು), ಇಂತಹ ವಾಯುಗುಣ, ಇಂತಹ ಮೇಲ್ಮೈ ಲಕ್ಷಣಗಳು (ಉದಾ: ಬೆಟ್ಟ , ಗುಡ್ಡ ಪರ್ವತ, ಬಯಲು, ಕಾಡು , ಮರುಭೂಮಿ, ಇತ್ಯಾದಿ), ಸನ್ನಿವೇಶ / ಪರಿಸರ (ಉದಾ: ನದೀತೀರ, ಸಮುದ್ರತೀರ), ವಿಸ್ತೀರ್ಣ (ಇಷ್ಟು ಚದುರ ಕಿಲೋಮೀಟರುಗಳು), ಇತ್ಯಾದಿ.

ಹೆಸರು ಮಾತ್ರವಲ್ಲದೆ ಬೇರೆ ಏನೇನೋ ವಿಶೇಷಗಳನ್ನ ಊರುಗಳಿಗೆ ಸೇರಿಸುತ್ತೇವೆ. ಒಂದು ಊರಿನ ಬಗ್ಗೆ ಪ್ರೀತಿಯೋ ದ್ವೇಷವೋ ಯಾವುದೊ ವಿಧವಾದ ಭಾವನೆಗಳೂ ನಮ್ಮಲ್ಲಿ ಮೂಡುತ್ತವೆ. ನಮ್ಮ ಹುಟ್ಟೂರು ಎಂದರೆ ಅದರ ಬಗ್ಗೆ ನಮ್ಮಲ್ಲಿ ಪ್ರೀತಿ ವಿಶ್ವಾಸಗಳು ಇರಬೇಕು ಅನ್ನುವುದೇನೂ ಕಡ್ಡಾಯವಲ್ಲ. ನಮ್ಮ ಮನಸ್ಸಿಗೆ ಎಲ್ಲಿ ಸುಖ ಅನಿಸುತ್ತದೆಯೋ ನಾವು ಆ ಊರಿನಲ್ಲಿ ಹುಟ್ಟಲಿಲ್ಲವಾದರೂ ಅದು ನಮ್ಮೂರಾಗ ಬಹುದು.

ವಾಟ್ಸಾಪ್ ವಿನೋದ

ಊರಿನ ಹೆಸರುಗಳನ್ನು ವಕ್ರ ವಿನೋದ ರೀತಿಯಲ್ಲಿ ಯಾರೋ ವಾಟ್ಸಪ್ಪಿನಲ್ಲಿ ನನಗೆ ಕಳುಹಿಸಿದರು. ಈ ಸುಳಿವುಗಳನ್ನಿಟ್ಟುಕೊಂಡು 23 ಊರಿನ ಹೆಸರುಗಳನ್ನು ಗುರುತಿಸಿರಿ ಅಂತ. ಅದನ್ನ ನೋಡಿದ ಕೂಡಲೇ ನನಗೆ ಹೊಳೆದಿದ್ದು ನನ್ನ ಅತ್ಯಂತ ಪ್ರೀತಿಯ ಭೂಗೋಳಶಾಸ್ತ್ರ! ಇದನ್ನು ಯಾಕೆ ಮಕ್ಕಳೊಂದಿಗೆ ಹಂಚಿಕೊಳ್ಳಬಾರದು ಎಂದೆನಿಸಿತು.

ಹೀಗಾಗಿ ಇವತ್ತಿನ ಬ್ಲಾಗ್ ಲೇಖನ.

ಈ ಊರಿನ ಹೆಸರುಗಳನ್ನಿಟ್ಟು ಪದಾನ್ವೇಷಣೆಯೊಂದನ್ನು ರಚಿಸಬೇಕೆಂದು ಅನ್ನಿಸಿತು. ಒಂದೊಂದು ಪದಾನ್ವೇಷಣೆಯಲ್ಲಿ ಹತ್ತು ಅಥವಾ ಹನ್ನೊಂದು ಹೆಸರುಗಳನ್ನು ಹಾಕಿ ಎರಡು ಪದಾನ್ವೇಷಣೆ ಆಟಗಳನ್ನ ಇಲ್ಲಿ ಕೊಟ್ಟಿದ್ದೇನೆ. ನನಗೆ ವಾಟ್ಸಾಪ್ಪಿನಲ್ಲಿ ಬಂದ ಎಲ್ಲ ಒಗಟುಗಳೂ ಮತ್ತು ಅವುಗಳ ಪರಿಹಾರಗಳೂ ಈ ಎರಡು ಆಟಗಳಲ್ಲಿ ಇವೆ.

ಇವೆರಡೂ ಆಟಗಳು ಸೇರಿ ಎರಡು ಹೆಜ್ಜೆ ಅಂತ ಇಟ್ಟುಕೊಳ್ಳಿ. ಮುಂದೆ …

 • ಈ ಪದಗಳನ್ನು ಕಂಡು ಹಿಡಿದನಂತರ, ಇಲ್ಲಿ ಕೊಟ್ಟಿರುವ ಪಿ.ಡಿ.ಎಫ್. ಫೈಲ್-ಅನ್ನು ಡೌನ್ಲೋಡ್ ಮಾಡಿ ಮೂರನೆಯ ಹೆಜ್ಜೆಗೆ ಹೋಗಿ.
 • ಈ ಆಟದ ಪ್ರತಿ ಊರಿಗೂ ಮಾಹಿತಿ ಕಂಡು ಹಿಡಿದು ಇದರಲ್ಲಿ ಬರೆಯಿರಿ.
 • ಅದೇ ಹಾಳೆಯ ಮೇಲೆ,
  • ನಿಮ್ಮೂರಿನ ಹೆಸರಿನ ಬಗ್ಗೆ ನೀವೇನಾದರೂ ಕಂಡು ಹಿಡಿದಿದ್ದರೆ ಆ ಮಾಹಿತಿಯನ್ನೂ ಕೊಡಿ
  • ಈ ಚಟುವಟಿಕೆಯ ಬಗ್ಗೆ ನಿಮ್ಮ ಅನಿಸಿಕೆಗಳೇನು ಅನ್ನುವುದನ್ನೂ ತಿಳಿಸಿ
  • ನಿಮ್ಮ ಬಗ್ಗೆ ಮಾಹಿತಿಯನ್ನು ಕೊಡಿ
 • ಹಾಳೆಗಳು ಪೂರ್ತಿಯಾದಮೇಲೆ ಅವುಗಳನ್ನು ನಿಮ್ಮ ಫೋನಿನಲ್ಲಿ ಫೋಟೋ ತೆಗೆಯಿರಿ.
 • ಆ ಫೋಟೋಗಳನ್ನು ಈ ಈಮೇಲಿಗೆ ಕಳುಹಿಸಿ — geo@tigsindia.com

ನಿಮ್ಮ ಉತ್ತರಗಳನ್ನು ನಮ್ಮ ಇದೇ ಬ್ಲಾಗಿನಲ್ಲಿ ಪ್ರಕಟಿಸುತ್ತೇವೆ.

ಇಗೋ ಮೊದಲ ಪದಾನ್ವೇಷಣೆ

 


 

 

ಇಗೋ ಎರಡನೆಯ ಪದಾನ್ವೇಷಣೆ

 


 

Categories:

Tags:

No responses yet

Share your thoughts

%d bloggers like this: