ನಮ್ಮ ಭೂಗೋಳಶಾಸ್ತ್ರ

ನಮಸ್ಕಾರ. ಭೂಗೋಳ ಶಾಸ್ತ್ರವನ್ನು ಪಠ್ಯ ಪುಸ್ತಕಗಳಲ್ಲಿ ಓದಿ ಬೇಸತ್ತವರಿಗಾಗಿ ಬರೆಯುವ ಬ್ಲಾಗ್ ಇದು. ಭೂಗೋಳ ಶಾಸ್ತ್ರ ನಮ್ಮ ಜೀವನದಲ್ಲಿ ಎಲ್ಲೆಲ್ಲೂ ಕಾಣಿಸುತ್ತದೆ. ಭೂಗೋಳ ಶಾಸ್ತ್ರಕ್ಕೂ ಎಲ್ಲ ವಿಷಯಗಳಿಗೂ ಇರುವ ಸಂಬಂಧಗಳನ್ನು ಹುಡುಕಿ ಅದರ ಸ್ವಾರಸ್ಯಗಳನ್ನು ನಿಮ್ಮೊಡನೆ ಹಂಚಿಕೊಳ್ಳುವುದೇ ಈ ಕನ್ನಡ ಬ್ಲಾಗ್ ಲೇಖನಗಳ ಉದ್ದೇಶ. ಇವುಗಳನ್ನು ಓದಿ. ಈ ಸ್ವಾರಸ್ಯಗಳನ್ನ ನೀವು ಕಾಣಿ. ಇತರರೊಡನೆಯೂ ಹಂಚಿಕೊಳ್ಳಿ. – ಡಾ || ಚಂದ್ರಶೇಖರ ಭಾಲಚಂದ್ರನ್
“ಊರು” ಬಹಳ ಸ್ವಾರಸ್ಯವಾದ ಪರಿಕಲ್ಪನೆ. ಇಂದು ಇದರ ಬಗ್ಗೆ ಸ್ವಲ್ಪ ವಿವರ, ಮತ್ತು 3 ಭಾಗದ ಚಟುವಟಿಕೆ.
ನೂರಾರು, ಇಲ್ಲ ಸಾವಿರಾರು, ವರ್ಷಗಳಿಂದ ಮಾನವರು ಭೂಮಿಯನ್ನು ನೋಡಿ ವಿಸ್ಮಯಗೊಂಡದ್ದು ಉಂಟು. ವಿಸ್ಮಯ ಮಾತ್ರ ಏನು, ನವ (ಅಂದರೆ ಒಂಭತ್ತು) ರಸಗಳನ್ನೂ ಅನುಭವಿಸಿದ್ದಾರೆ. ಇಂದಿಗೂ ನಾವು ಭೂಮಿಯನ್ನು ಗಮನಿಸಿದಾಗ ಅನೇಕ ವಿಧವಾದ ಭಾವನೆಗಳೂ ಯೋಚನೆಗಳೂ  ನಮ್ಮಲ್ಲಿ ಮೂಡುತ್ತವೆ.
ಯಾರೋ ಒಬ್ಬರು (ನನ್ನ ಅವರ ಕಣ್ಣುಗಳು ಸಂಧಿಸಿದಾಗ, ಮುಗುಳ್ನಗೆಯೊಡನೆ): “ನೀವು  ಬೆಂಗಳೂರ?” ನಾನು (ಅಂತೆಯೇ ಮುಗುಳ್ನಗೆಯೊಂದಿಗೆ): “ಹೌದು. ನೀವು?”
ಎಲ್ಲರಿಗೂ  ನಮಸ್ಕಾರ ! ಕನ್ನಡದಲ್ಲಿ ಭೂಗೋಳಶಾಸ್ತ್ರಕ್ಕೂ ನಮ್ಮ ನಿಮ್ಮ ಜೀವನಕ್ಕೂ ಇರುವ ಸಂಬಂಧಗಳ ಬಗ್ಗೆ ಕನ್ನಡದಲ್ಲಿ “ಬ್ಲಾಗ್” ಬರೆಯಲು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದೆ. ಆದರೆ ಹಲವಾರು ಕಾರಣಗಳಿಂದಾಗಿ ಅದನ್ನು ಮುಂದುವರಿಸಲಿಲ್ಲ. ಈಗ ಪುನಃ ಪ್ರಾರಂಭಿಸಿ ಮುಂದುವರಿಸೋಣ ಎಂದುಕೊಂಡು ಬರೆಯಲಿಕ್ಕೆ ಹೊರಟಿದ್ದೇನೆ.
HNY-IMAGE2
ಬೆಂಗಳೂರಿನಲ್ಲಿ ಕಾಕ್ಸ್ ಟೌನಿನಲ್ಲಿರುವ ಎಮ್.ಇ.ಜಿ. ಸ್ಕೂಲಿನ ೮-ನೆಯ ತರಗತಿಯ ಮಕ್ಕಳು ಅಕ್ಷಾಂಶಗಳು ಮತ್ತು ರೇಖಾಂಶಗಳ ಬಗ್ಗೆ ಕೆಲವು ದಿನಗಳ ಕಾರ್ಯಾಗಾರದಲ್ಲಿ ಕಲಿತರು.
ಭೂಗೋಳಶಾಸ್ತ್ರವನ್ನ ಕಲಿಯವುದಕ್ಕಾಗಲಿ ಕಲಿಸುವುದಕ್ಕಾಗಲಿ ಹುಮ್ಮಸ್ಸು ಬರಬೇಕಾದರೆ, ಅದರ ಸಂಬಧ್ಧತೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದನ್ನು ತಿಳಿದುಕೊಂಡರೆ ಭೂಗೋಳಶಾಸ್ತ್ರದ ಉಪಯೋಗದ ಅರಿವಾಗಿ, ಕಲಿಯಲೂ ಕಲಿಸಲೂ ಹುಮ್ಮಸ್ಸು ಬರುತ್ತದೆ.
ಸಮುದ್ರಯಾನ ಮಾಡಿ ಎಡರಿದರು … ಬಾಯಲ್ಲಿ ಬೆಂಕಿ ಬಿದ್ದು, ಮೂಗಲ್ಲಿ ನೀರು ಸುರಿದು, ಕಿವಿಯಲ್ಲಿ “ಗುಂಯ್”ಗುಟ್ಟುವ ಗಟ್ಟಿಯಾದ ಸದ್ದು ಕೇಳುತ್ತಾ, ತಲೆ ಸಿಡಿದುಹೋಗುವಂತಾಗಿ ಬಾಯಿ ಬಡಿದುಕೊಂಡು, ಕೈಗಳನ್ನು ಅತ್ತಿತ್ತ ಬೀಸುತ್ತಾ, ಕುಣಿದಾಡಿದರು … ಉತ್ತರ ಕರ್ಣಾಟಕದಲ್ಲಿ ಜನರಿಗೆ ಹೆಸರು ಬಂತು! 
HNY-IMAGE2
“ಈ ಅಕ್ಷಾಂಶ ಮತ್ತು ರೇಖಾಂಶಗಳಿವೆಯಲ್ಲಾ, ಅದರಷ್ಟು ತೂಕಡಿಕೆ ಬರಿಸುವಂಥ ವಿಷಯ ಉಂಟೇನ್ರೀ, ಮಾರಾಯ್ರೇ?”
“ಗುರು” ಅನ್ನಿಸಿಕೊಳ್ಳುವವರು ಬರೀ ಪಠ್ಯ ವಸ್ತುಗಳನ್ನು ಕಲಿಸಿಕೊಡುವವರು ಮಾತ್ರವಲ್ಲ,
%d