ಬೆಂಗಳೂರಿನಲ್ಲಿ ಕಾಕ್ಸ್ ಟೌನಿನಲ್ಲಿರುವ ಎಮ್.ಇ.ಜಿ. ಸ್ಕೂಲಿನ ೮-ನೆಯ ತರಗತಿಯ ಮಕ್ಕಳು ಅಕ್ಷಾಂಶಗಳು ಮತ್ತು ರೇಖಾಂಶಗಳ ಬಗ್ಗೆ ಕೆಲವು ದಿನಗಳ ಕಾರ್ಯಾಗಾರದಲ್ಲಿ ಕಲಿತರು.
ಮೊದಲು ಚಪ್ಪಟೆಯ ಕಾಗದದ ಹಾಳೆಯ ಮೇಲೆ ಅಕ್ಷಾಂಶಗಳು ಮತ್ತು ರೇಖಾಂಶಗಳ ವಿನ್ಯಾಸವನ್ನು ಕಲಿತರು. ಆ ಹಾಳೆಯ ಮೇಲೆ ನಿರ್ದಿಷ್ಟವಾದ ಸ್ಥಾನ ನಿರ್ದೇಶಕಗಳನ್ನು ಉಪಯೋಗಿಸುವುದನ್ನು ಕಲಿತರು.
ಅವರ ಬಗೆ ನಮಗೆಲ್ಲ ಹೆಮ್ಮೆ!
ಭೂಗೋಳಶಾಸ್ತ್ರ, ಬೆಂಗಳೂರು, ದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ಼್ ಜೆಯೊಗ್ರಾಫಿಕಲ್ ಸ್ಟಡೀಸ್, ಟಿಐಐಜಿಎಸ್, ಭಾರತ, ಎಮ್.ಇ.ಜಿ., ಜಾಗೃತಿ, ಚಂದ್ರಶೇಖರ್ ಬಾಲಚಂದ್ರನ್, ಕನ್ನಡ, ವಿದ್ಯಾರ್ಥಿಗಳು
ನಂತರ ಈ ತತ್ತ್ವಗಳನ್ನು ಒಂದು ಗೋಳದ ಮೇಲೆ ವಿನ್ಯಾಸಗೊಳಿಸಿ, ಗೋಳದ ಮೇಲೆ ಅಕ್ಷಾಂಶಗಳು ಮತ್ತು ರೇಖಾಂಶಗಳ ಲಕ್ಷಣಗಳು ಮತ್ತು ಉಪಯೋಗಿಸುವ ವಿಧಾನಗಳನ್ನು ಕಲಿತರು.
ಆರಂಭದ ದಿನ ಇದ್ದ ನಿರ್ಲಕ್ಷ್ಯ ಮಾಯ!
ಈ ಚಿತ್ರಗಳಲ್ಲಿ ಅವರ ಹುಮ್ಮಸ್ಸು, ಆನಂದ ಎದ್ದು ಕಾಣುತ್ತವೆ. ಮುಂಚಿಗಿಂತ ಈಗ ಅಕ್ಷಾಂಶಗಳು ಮತ್ತು ರೇಖಾಂಶಗಳ ಬಗ್ಗೆ ಅವರಿಗೆ ತಕ್ಕ ಮಟ್ಟಿಗೆ ಚೆನ್ನಾಗಿ ಅರ್ಥವಾಗಿದೆ.
ಹೌದು, ಈ ಗೋಳಗಳೆಲ್ಲ ತರ್ಮೊಕೋಲಿನವು. ಅದಕ್ಕೆ ನಾವು ಭೂಮಿಯ ಕ್ಷಮೆಯನ್ನು ಕೋರುತ್ತೇವೆ. ಆದಷ್ಟು ಬೇಗ ಪರಿಸರ-ಸ್ನೇಹಿ ವಸ್ತುಗಳನ್ನು ಉಪಯೋಗಿಸಿಯೇ ಈ ಕಾರ್ಯಾಗಾರವನ್ನು ಮಾಡಲು ಪ್ರಯತ್ನಿಸುತ್ತೇವೆ.
ಇಗೋ ೧೭ ಫೆಬ್ರವರಿ ೨೦೧೨ ರಂದು ಈ ಭೂ-ಕಿರಿಯರು ತಮ್ಮ ತರಗತಿಯಲ್ಲಿ ತಮ್ಮ ಭೂಗೋಳಗಳನ್ನು ಪ್ರದರ್ಶಿಸುತ್ತಿರುವ ಸ್ಥಿರ ಚಿತ್ರಗಳ ಸಂಕಲನ.
(ಇದರ ವಿಡಿಯೊವನ್ನು ಶೀಘ್ರದಲ್ಲಿಯೇ ಇಲ್ಲಿ ಹಂಚಿಕೊಳ್ಳುವ ಯೋಜನೆಯಿದೆ.)
Comments are closed