ಭೂಗೋಳ ಶಾಸ್ತ್ರ ಎಲ್ಲೆಲ್ಲೂ ವ್ಯಕ್ತವಾಗುತ್ತದೆ. ನೋಡುವ ದೃಷ್ಟಿ ಬೇಕು, ಅಷ್ಟೇ!

ಭೂಗೋಳ ಶಾಸ್ತ್ರಕ್ಕೂ ನಮ್ಮ ಲಲಿತ ಕಲೆಗಳಿಗೂ, ಕಾವ್ಯ ಕವನಗಳಿಗೂ ಕೂಡ ನಿಕಟವಾದ ಸಂಬಂಧ ಇದೆ ಎನ್ನುವುದು ಬಹಳ ಜನರ ಮನಸ್ಸಿಗೆ ಬರುವುದಿಲ್ಲ. ಏನೀ ಸಂಬಂಧ ಎಂದು ಕುತೂಹಲವಾ ನಿಮಗೆ?

ಅಮೇರಿಕಾದ Association of American Geographers ಮತ್ತು ಬೆಂಗಳೂರಿನ The Indian Institute of Geographical Studies, ಎರಡೂ ಸಂಸ್ಥೆಗಳು ಸೇರಿ ಒಂದು ಅಂತರ ರಾಷ್ಟ್ರೀಯ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ನಡೆಸುವವರಿದ್ದಾರೆ. ಅದರ ಅಂಗವಾಗಿ ಭೂಗೋಳ ಶಾಸ್ತ್ರಕ್ಕೂ ಹಲವು ಲಲಿತ ಕಲೆಗಳಿಗೂ ಇರುವ ಸಂಬಂಧಗಳನ್ನು ಎತ್ತಿ ತೋರಿಸಲು ಒಂದು ಸಾರ್ವಜನಿಕ ಮನರಂಜನಾ ಕಾರ್ಯಕ್ರಮವನ್ನು ಕಲ್ಪಿಸಿದ್ದೇವೆ.

ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ Army Public Schoolಇನ ವಿದ್ಯಾರ್ಥಿಗಳು ಗಾಯನ, ಭರತ ನಾಟ್ಯ, ಹಾಗೂ ಕಥಕ್ ಕಾರ್ಯಕ್ರಮವನ್ನು ಅರ್ಪಿಸಲಿದ್ದಾರೆ. ಎಲ್ಲ ಕೃತಿಗಳೂ ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದವೇ ಆಗಿರುತ್ತವೆ.

ಕಾರ್ಯಕ್ರಮದ ಪೂರ್ಣ ವಿವರಗಳನ್ನು ಕಾರ್ಯಕ್ರಮದ ಸಂಜೆ ಸಭಾಂಗಣದಲ್ಲಿ ಕೊಡಲಾಗುವುದು.

ಎಲ್ಲಿ:  Army Public School, ಕೆ. ಕಾಮರಾಜ್ ರಸ್ತೆ, ಬೆಂಗಳೂರು
ಯಾವಾಗ: ಸಂಜೆ 6:30 ರಿಂದ 8:30 ರ ವರೆಗೆ, ಬುಧವಾರ, 14 ಮಾರ್ಚ್ 2012
ಉಡುಗೆಯ ಸಲಹೆ: ಸಾಧ್ಯವಾದಮಟ್ಟಿಗೂ ಸಾಂಪ್ರದಾಯಿಕ ಭಾರತೀಯ ಉಡುಗೆ
ಪ್ರವೇಶ: ಉಚಿತ, ಸಾರ್ವಜನಿಕ ಕಾರ್ಯಕ್ರಮ
ದಾರಿ: ಈ ಕೆಳಗಿನ ನಕಾಶೆಯನ್ನು ಉಪಯೋಗಿಸಿಕೂಳ್ಳಿ

ಈ ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆಗಳು:

Association of American Geographers
Army Public School, Bangalore
The Indian Institute of Geographical Studies
GeoVidyaa Geography Centre of Excellence

Categories:

Comments are closed

%d bloggers like this: